Submission 687

ನನ್ನವಳು

ರಚನೆ : ರಾಘವೇಂದ್ರ

----------------------------------

ಅದೊಂದಿನ ನಿಸರ್ಗದ ಬದಲು ಪ್ರೀತಿಯ ಸೆಳೆತ ಅವಳ ಅಂದಚಂದದಿಂದ... ಮಂಜಿನ ಮುಸಕಿನಲ್ಲಿ ಅವಳ ಪ್ರಕಾಶಮಾನ ಮೊಗವು ಸೂರ್ಯನಿಗೂ ಅಸೂಯೆ ಮೂಡಿಸಿತ್ತು ಇನ್ನು ಅವಳನ್ನು ಪ್ರತ್ಯಕ್ಷ ಕಂಡ ಎನ್ನ ಮನಕೆ ಮೋಡಿ ಮಾಡುವುದು ತಡವೇ ? ಅವಳ ಕಿವಿಯೋಲೆ ಕೈ ಬೀಸಿ ಕರೆದು ಇವಳು ಮುಡಿದ ಮಲ್ಲಿಗೆ ಹೂವಿನ ಮಾಲೀಕ ನೀನೆನಾ? ಅವಳು ತೊಟ್ಟ ಮುಗುತ್ತು ಇವಳ ತುಟಿಯ ಮೇಲಿನ ನಗು ನಿನಗಾಗಿನ? ಅವಳ ಚಂದದ ಬಳೆ ಇವಳ ಕೈ ಇಡಿಯುವ ಕಲೆಗಾರನ? ಅವಳ ಗೆಜ್ಜೆಯ ನಾದವು ಇವಳ ಕಾಲುಂಗುರಿನ ಕಾವಲುಗಾರನ ? ಎಂದು ನನ್ನ ಕಿವಿಯಲ್ಲಿ ಪಿಸುಗೂಡುವಂತೆ ಭಾಸವಾಗುತಿತ್ತು....

----------------------------------

ನೋಂದಣಿ ಐಡಿ : KPF-S1-5296

0
Votes
210
Views
1 Year
Since posted

Finished since 394 days, 19 hours and 50 minutes.

Scroll to Top