Submission 521

ಎದೆಗೆವಚಿದ ನೋವುಗಳು

ರಚನೆ : ಎಸ್. ರಾಜು ಸೂಲೇನಹಳ್ಳಿ

----------------------------------

ನಂಬಿಕೆಗಳು ಸತ್ತಾಗ ಹುಟ್ಟುವ ಆಸೆಗಳಿಗೇನು ಬೆಲೆ ಹೃದಯ ಅಂಕುರ ಸುಟ್ಟಾಗ ತೋರುವ ಪ್ರೇಮಕ್ಕೇನು ಬೆಲೆ ಮನಸ್ಸು ಅತೀವ ನೋವು ಪಟ್ಟಾಗ ಸ್ಪಂದಿಸಿದರೇನು ಬೆಲೆ ಕಣ್ಣೇದುರೇ ಕಪಟ ನಾಟಕಗಳು ತಿಳಿದಾಗ ಅರಿವಾದರೇನು ಬೆಲೆ ಹಾದಿ ತಪ್ಪಿದ ವ್ಯಕ್ತಿತ್ವ ಮರಳಿ ಮೊದಲಿನಂತಾದರೆ ಏನು ಬೆಲೆ ಸ್ಪರ್ಶದ ಸೆಳೆತ ಮತ್ತೊಬ್ಬರ ಮೇಲೆ ಅರಳಿದರೇನು ಬೆಲೆ ಬಯಕೆಗಳು ಮುಗಿಲಾಚೆ ಸೇರಿರಲು ಆಸರೆ ಬಯಸಿದರೇನು ಬೆಲೆ ಸ್ವರ್ಗದ ಬಾಗಿಲು ಅನ್ಯರ ಪಾರಾದ ಮೇಲೆ ಪುನಹ ಬಂದರೇನು ಬೆಲೆ ಇದ್ದು ಸತ್ತಂತಿರುವ ದೇಹವ ತಾಕಿ ಆಲಿಂಗನ ಬಯಸಿದರೇನು ಬೆಲೆ ಎಲ್ಲಾ ಮುಗಿದಿರಲೂ ಉಳಿದಿಲ್ಲ ಅವಳು ಅವಳಾಗಿ ಇರದ ಬದುಕು ಮಾರಿಕೊಂಡೆ ಭಾವಗಳು ಎದೆಗೆವಚಿ ಸದಾ ಕೊರಗುವಂತೆ ಮಾಡುತ್ತಿವೆ

----------------------------------

ನೋಂದಣಿ ಐಡಿ : KPF-S1-5094

0
Votes
209
Views
1 Year
Since posted

Finished since 394 days, 20 hours and 47 minutes.

Scroll to Top