Submission 509

ಕಲಿಯುಗ

ರಚನೆ : ಶ್ರೀ. ಶಿವಾನಂದ ಆರ್ ಭಾಗಾಯಿ

----------------------------------

ದಿನದಿಂದ ದಿನಕ್ಕೆ ಅಂತ್ಯದ ದಾರಿ ಹಿಡಿದು ಸಾಗುತ್ತಿದೆ ಜಗ ಅದರಿಂದ ಜಗದಲ್ಲಿ ಮಾನವೀಯತೆಗೆ ಇಲ್ಲದಂತಾಗಿದೆ ಜಾಗ.!! ತಡೆಯಲು ಎಷ್ಟೇ ಪ್ರಯತ್ನಿಸಿದರು ನಿಲ್ಲುತಿಲ್ಲ ಸುಳ್ಳಿನ ವೇಗ ಲೋಕದಲ್ಲಿ ಸುಳ್ಳಿನ ಸಾಮ್ರಾಜ್ಯ ನೆಲೆಯೂರುತಿದೆ ಬೇಗ.!! ಚೈತನ್ಯವಿಲ್ಲದೆ ಬಾಡುತಲಿದೆ ಸ್ವಾರ್ಥ ಮನುಜನ ಮೊಗ ಇದಕೆಲ್ಲ ಕಾರಣ ಜಗವನ್ನಾಳುತ್ತಿರುವ ಜೀವವಿಲ್ಲದ ನಗ.!!

----------------------------------

ನೋಂದಣಿ ಐಡಿ : KPF-S1-5079

0
Votes
216
Views
1 Year
Since posted

Finished since 394 days, 22 hours and 42 minutes.

Scroll to Top