Submission 485

ಮೌನಿ ನಾನಾಗಬೇಕು !!

ರಚನೆ : ಸುರಭಿ ಜೆ ಸಿ

----------------------------------

ಭೋರ್ಗರೆವ ಕಡಲ ತೀರದಿ, ಹೊನ್ನಿನ ಹೊಳಪಿನ ಮರಳ ಮೇಲೆ ಕೂತು, ತಂಪಾದ ಗಾಳಿಯು ಮೋರೆಯ ನೇವರಿಸಿ ಮುದ ನೀಡುತ್ತಾ, ಅಂಧಕಾರದ ಬೆನ್ನಲ್ಲೇ ಹಿಮಕರನು ತಿಳಿಯಾದ ಬೆಳಕಿನೊಂದಿಗೆ ಪ್ರಕಾಗಿಸುತ್ತಾ, ಪ್ರಶಾಂತವಾದ ಅಲೆಗಳ ಪಿಸು ಮಾತನ್ನು ಆಲಿಸುತ್ತಾ, ಮಿನುಗುವ ತಾರೆಗಳ ಎಣಿಸುತ್ತಾ, ಅಂತರ್ಭಾವವ ಮರೆತು, ಏಕಾಂತದ ಮಡುವಿನಲ್ಲಿ ಮರುಗಿದ ಮನದ ಮುಖವಾಡ ಕಳಚಿ, ಬಿರುಸಾಗಿ ಸುರಿವ ವರ್ಷಧಾರೆಯಲ್ಲಿ ಮಿಂದು, ಇಳೆಯ ತಂಪಾಗಿಸುವಂತೆ ಮನದ ಹಗೆ ತಣಿಸಿ , ಮೌನಿ ನಾನಾಗಬೇಕು!!

----------------------------------

ನೋಂದಣಿ ಐಡಿ : KPF-S1-5051

0
Votes
212
Views
1 Year
Since posted

Finished since 394 days, 20 hours and 49 minutes.

Scroll to Top